ಹೆಚ್ಚೇನೂ ಬರೆಯಲು ತಿಳಿದಿಲ್ಲ,
ಅಲ್ಪಸ್ವಲ್ಪವಾದರೂ ಬರೆಯೋಣವೆಂದರೆ
ಹಸ್ತವೂ ಚಲಿಸುತ್ತಿಲ್ಲ..
ಹೆಚ್ಚೇನೂ ಮಾತನಾಡಲು ಜ್ಞಾನವಿಲ್ಲ
ಏನಾದರೂ ಹೇಳೋಣವೆಂದರೆ, ಅಕ್ಷರ ಹೊರಡುವುದೇ ಇಲ್ಲ,
ಯಾಕೆ ಹೀಗಾಗಿದೆ, ಇಲಾಹನೇ ಬಲ್ಲ..
ನನ್ನ ಆಶೀರ್ವದಿಸುವಿರಾ ಯಾ ರಸೂಲುಲ್ಲಾ,
ಓ.. ತಮಗೆ ನನ್ನ ಪರಿಚಯವಿರುಲು ನಾನೇನೂ ಮಾಡಿಲ್ಲ,
ತಮ್ಮ ಮಾತಿಗೆ ತಪ್ಪಾಗಿ ನಡೆದ ನನ್ನ ಪಾಪಕ್ಕೇನೂ ಕಡಿಮೆಯಿಲ್ಲ,
ಗೀಚಲು, ಹೊಗಳಲು
ಬಳಸುವ ಪದಗಳು ಮಲಿನ ಹೃದಯದಿಂದಲೇ ಅಲ್ವಾ..
ಇನ್ನು ಹೇಗೆ ನಾ ಬರೆಯಲಿ,
ಪ್ರಾಯಶ್ಚಿತವಲ್ಲದೆ ದಾರಿ ಬೇರೆಯಿಲ್ಲವೇ ಇಲ್ಲ,
ಪಾಪ ಮೋಚನೆ ನೀಡು ಯಾ ಅಲ್ಲಾಹ್…
Post Comment