ನನ್ನ ನೆಲ ನನ್ನವರಿಲ್ಲಿ ಆರಾಮವಾಗಿದ್ದರು
ಯಾರೋ ಬಂದರಂತೆ
ನನ್ನವರ ವಿಶಾಲ ಹೃದಯ
ಬಂದವರನ್ನು ಸ್ವೀಕರಿಸಿದರಂತೆ
ನನ್ನನ್ನೊಮ್ಮೆ ನೋಡಿ
ಅಣ್ಣ ತಮ್ಮ ಎಂದು ತಬ್ಬಿಕೊಂಡೆ
ಅವರದ್ದು ರಹಸ್ಯವಾಗಿತ್ತು
ಅತಿಥಿಗಳುನನ್ನಎದುರಾಳಿಯಾಗುವವರೆಂದು ನಾನೇನು ಬಲ್ಲೆ?
ಅದು ಭಯಾನಕವಾಗಿತ್ತು!!!
ನನ್ನನ್ನೊಮ್ಮೆ ನೋಡಿ
ಎಲ್ಲೆಗಳಿಲ್ಲದ ಉಪಟಳದಿ ದಿನವ ದೂಡಿದೆ ನಾ
ಪ್ರತೀಕಾರಗಳಿಲ್ಲದೆ
ತುಳಿತಕ್ಕೊಳಗಾದ ಇರುವೆಯ ಪ್ರತೀಕಾರ
ಸಹಜವಲ್ಲವಂತೆ
ನನ್ನನ್ನೊಮ್ಮೆ ನೋಡಿ.
ಗೆದ್ದವರಿಗಿನ್ನು…. ಗೆಲ್ಲಬೇಕೆಂಬ ಛಲ
ನಾನಿಲ್ಲಿ ರಕ್ತವಾಗಿದ್ದೇನೆ
ವಿಸ್ತಾರದ ನಶೆಯಲ್ಲಿ ತೇಲುವವನು -ಹೇಳಿದನಂತೆ.
ಇದು ನನ್ನ ವಿಜಯ
ನನ್ನನ್ನೊಮ್ಮೆ ನೋಡಿ
3 comments